ಹರಿಯುವ ನದಿಯಲ್ಲಿ ಡ್ಯಾನ್ಸ್, ಮೈಮರೆತ ಯುವಕನ ಸ್ಥಿತಿ ಹೀಗಾಯ್ತು! ವಿಡಿಯೋ - ನಿಜಾಮಾಬಾದ್ ಸುದ್ದಿ
ಸಾಮಾಜಿಕ ಜಾಲತಾಣ ಮೂಲಕ ಜನಪ್ರಿಯಗೊಳ್ಳಬೇಕೆಂದು ಯುವಕನೋರ್ವ ತನ್ನ ಪ್ರಾಣವನ್ನೇ ಕಳೆದುಕೊಂಡಿರುವ ಘಟನೆ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಪ್ರವಾಹದ ಸ್ಥಳದಲ್ಲಿ ವಿಡಿಯೋ ಮಾಡುತ್ತ, ಮೈಮರೆತ ಯುವಕನೋರ್ವ ಈಗ ಬಾರದಲೋಕಕ್ಕೆ ತೆರಳಿದ್ದಾನೆ. ದಿನೇಶ್ ಎಂಬಾತ ನದಿಯಲ್ಲಿ ಕೊಚ್ಚಿ ಹೋಗಿರುವ ಯುವಕ. ತನ್ನ ಸ್ನೇಹಿತರಾದ ಮನೋಜ್ ಮತ್ತು ಗಂಗಾಚಲಂ ಜೊತೆ ಸೇರಿ ವಾಯುವಿವಾರಕ್ಕೆ ತೆರಳಿದ್ದ. ಈ ವೇಳೆ ಸ್ನೇಹಿತರೊಂದಿಗೆ ಎಂಜಾಯ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯಗೊಳ್ಳುವುದಕ್ಕಾಗಿ ದಿನೇಶ್ ಗೋನುಗೊಪ್ಪಲದ ನದಿಯಲ್ಲಿ ವಿಡಿಯೋ ಹಾಡಿಗೆ ಸ್ಟೆಪ್ ಹಾಕುತ್ತಿದ್ದ. ಆಗ ಕಾಲು ಜಾರಿ ನದಿಯ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದಾನೆ. ಕೂಡಲೇ ಸ್ಥಳೀಯರು ಸಹಾಯಕ್ಕೆ ದೌಡಾಯಿಸಿದರೂ ಪ್ರಯೋಜನವಾಗಿಲ್ಲ. ಎರಡು ದಿನಗಳ ಬಳಿಕ ದಿನೇಶ್ ಮೃತದೇಹ ದೊರೆತಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮುಂದಿನ ಕ್ರಮ ಕೈಗೊಂಡಿದ್ದಾರೆ.
Last Updated : Sep 22, 2019, 3:44 PM IST