ಜಲ ಪ್ರಳಯ: ಬಿಹಾರದಲ್ಲಿ 40 ಲಕ್ಷ ಮಂದಿಗೆ ಸಂಕಷ್ಟ - 1,000 ಕ್ಕೂ ಹೆಚ್ಚು ಸಮುದಾಯ ಅಡಿಗೆಮನೆ
ಪಾಟ್ನಾ( ಬಿಹಾರ) : ಬಿಹಾರದಲ್ಲಿ ಹರಿಯುತ್ತಿರುವ ಬಹುತೇಕ ನದಿಗಳ ನೀರಿನ ಮಟ್ಟ ಅಪಾಯದ ಮಟ್ಟವನ್ನೂ ಮೀರಿ ಏರಿಕೆ ಕಂಡಿವೆ. ಇದರಿಂದ ಬಿಹಾರದ ಸುಮಾರು 40 ಲಕ್ಷ ಮಂದಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಒಂದೆಡೆ ಪ್ರವಾಹ ಮತ್ತೊಂದೆಡೆ ಕೊರೊನಾ ಅಶೋಕನಾಳಿದ ರಾಜ್ಯವನ್ನ ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡಿದೆ. ಇದುವರೆಗೂ ಪ್ರವಾಹದಿಂದ ಸುರಕ್ಷಿತವಾಗಿದ್ದ ಮಧುಬನಿ ಮತ್ತು ಸಿವಾನ್ ಜಿಲ್ಲೆಗಳ 71 ಪಂಚಾಯಿತಿಗಳು ಈಗ ವಿಪತ್ತಿಗೆ ತುತ್ತಾಗಿವೆ. ಪ್ರವಾಹ ಪೀಡಿತ ಜಿಲ್ಲೆಗಳ ಸಂಖ್ಯೆ ಈಗ 14ಕ್ಕೆ ಏರಿಕೆ ಕಂಡಿದೆ. ಜಲ ಪ್ರಳಯದಿಂದ ನಿರಾಶ್ರಿತರಾದವರ ಸಂಖ್ಯೆ 39.63 ಲಕ್ಷಕ್ಕೆ ಏರಿದ್ದು, ಸಾವಿನ ಸಂಖ್ಯೆಯಲ್ಲೂ ಹೆಚ್ಚಳ ಕಾಣುತ್ತಿದೆ. ಇಲ್ಲಿಯವರೆಗೆ, 3.16 ಲಕ್ಷ ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. 19 ಪರಿಹಾರ ಶಿಬಿರಗಳನ್ನ ತೆರೆಯಲಾಗಿದೆ. 1,000 ಕ್ಕೂ ಹೆಚ್ಚು ಸಮುದಾಯ ಅಡುಗೆ ಮನೆಗಳಲ್ಲಿ ಆರು ಲಕ್ಷ ಜನರಿಗೆ ಆಹಾರವನ್ನು ಒದಗಿಸಲಾಗುತ್ತಿದೆ.