ಎಂಥಾ ದುರ್ವಿಧಿ! ರಸ್ತೆ ಗುಂಡಿಗೆ ಬಿದ್ದ ಬೈಕ್ ಸವಾರನ ಮೇಲೆ ಹರಿಯಿತು ಟ್ರಕ್, ವಿಡಿಯೊ - ಆಂಧ್ರಪ್ರದೇಶ
ಕರ್ನೂಲ್ (ಆಂಧ್ರ ಪ್ರದೇಶ): ಪೈಪ್ಲೈನ್ ಸೋರಿಕೆ ತಡೆಗಟ್ಟಲು ರಸ್ತೆಯಲ್ಲಿ ಗುಂಡಿ ಅಗೆದು ಹಾಗೆಯೇ ಬಿಟ್ಟಿದ್ದರಿಂದ ಬೈಕ್ ಮೇಲೆ ತೆರಳುತ್ತಿದ್ದಾಗ ಇಬ್ಬರು ಸಮತೋಲನ ಕಳೆದುಕೊಂಡು ಬಿದ್ದಿದ್ದಾರೆ. ಇದೇ ಸಮಯಕ್ಕೆ ಹಿಂದಿನಿಂದ ಬಂದ ಟ್ರಕ್ ಅವರ ದೇಹದ ಮೇಲೆ ಹರಿಯಿತು. ಪರಿಣಾಮ, ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ದುರ್ಘಟನೆ ಆಂಧ್ರ ಪ್ರದೇಶದ ಕರ್ನೂಲ್ನಲ್ಲಿ ನಡೆದಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.