ಕರ್ನಾಟಕ

karnataka

ETV Bharat / videos

ಐಸ್​ಕ್ರೀಮ್​ ಪಾರ್ಲರ್​ ಬಳಿ ನಿಂತವರ ಮೇಲೆ ದಿಢೀರ್​ ಹರಿದ ಕಾರು - ವಿಡಿಯೋ - ಐಸ್​ಕ್ರೀಮ್​ ತಿನ್ನುತ್ತ ನಿಂತವರ ಮೇಲೆ ಹರಿದ ಕಾರು

By

Published : Apr 5, 2021, 3:41 PM IST

ರಾಂಚಿ: ಆಯಸ್ಸು ಗಟ್ಟಿಯಾಗಿದ್ದರೆ ಜವರಾಯನೇ ಎದುರಿಗೆ ಬಂದ್ರೂ ಏನೂ ಮಾಡಲು ಸಾಧ್ಯವಿಲ್ಲ ಎಂಬ ಮಾತು ಕೆಲವೊಮ್ಮೆ ಅಕ್ಷರಶಃ ಸತ್ಯವಾಗುತ್ತದೆ. ಇದಕ್ಕೆ ಸಾಕ್ಷಿಯಂತಿದೆ ಜಾರ್ಖಂಡ್​ನ ರಾಂಚಿಯಲ್ಲಿ ನಡೆದಿರುವ ಈ ಘಟನೆ. ರಸ್ತೆ ಬದಿ ಐಸ್​ಕ್ರೀಮ್ ತಿನ್ನುತ್ತ ನಿಂತಿದ್ದ ಮಹಿಳೆಯರು ಹಾಗೂ ಮಕ್ಕಳ ಮೇಲೆ ಕಾರು ಹರಿದ್ರೂ, ಅದೃಷ್ಟವಶಾತ್​ ಯಾವುದೇ ಸಾವು-ನೋವು ಸಂಭವಿಸಿಲ್ಲ. ಚಿಕ್ಕಪುಟ್ಟ ಗಾಯಗಳೊಂದಿಗೆ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಂಚಿಯ ಬರಿಯಾಟು ಹೌಸಿಂಗ್​ ಕಾಲೋನಿ ಬಳಿಯಲ್ಲಿ ಈ ಘಟನೆ ನಡೆದಿದ್ದು, ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಮಹಿಳೆವೋರ್ವಳು ಕಾರ್​ ಡ್ರೈವಿಂಗ್​ ಕಲಿಯುತ್ತಿದ್ದ ವೇಳೆ ನಿಯಂತ್ರಣ ಕಳೆದುಕೊಂಡು ಐಸ್​ ಕ್ರೀಮ್ ಪಾರ್ಲರ್​ ಬಳಿ ನಿಂತಿದ್ದ ಮಹಿಳೆಯರು ಹಾಗೂ ಮಕ್ಕಳ ಮೇಲೆ ಹರಿಸಿದ್ದಾಳೆ.

ABOUT THE AUTHOR

...view details