ಬಾವಿಯೊಳಗೆ ಬಿದ್ದ ಮರಿಚಿರತೆ: ರಕ್ಷಣಾ ಕಾರ್ಯಾಚರಣೆ ಹೇಗಿದೆ ನೋಡಿ - ಬಾವಿಯೊಳಗೆ ಬಿದ್ದ ಚಿರತೆ ಸುದ್ದಿ
ಮಧ್ಯಪ್ರದೇಶದ ಧಾರ್ ಜಿಲ್ಲೆಯ ನಲಾಚಾದ ಪಡ್ಡಿ ಗ್ರಾಮದಲ್ಲಿ ತಡರಾತ್ರಿ ಚಿರತೆ ಮರಿಯೊಂದು ಬಾವಿಯೊಳಗೆ ಬಿದ್ದಿದೆ. ಇಂದು ಬೆಳಗ್ಗೆ ಚಿರತೆ ಬಾವಿಯಲ್ಲಿರುದನ್ನು ಗಮನಿಸಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಅಗ್ನಶಾಮಕ ದಳ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಚಿರತೆ ಮರಿಯನ್ನು ಸುರಕ್ಷಿತವಾಗಿ ಬಾವಿಯಿಂದ ಮೇಲಕ್ಕೆತ್ತಿದ್ದಾರೆ. ಬಳಿಕ ಅದನ್ನು ಮಾಂಡವ ಪ್ರದೇಶದ ಅರಣ್ಯಕ್ಕೆ ಬಿಡಲಾಗಿದೆ.