ಮನೆಗೆ ನುಗ್ಗಿದ ಚಿರತೆ... ಅಲ್ಲಿ ಮಾಡಿದ್ದೇನು ಅಂತಾ ವಿಡಿಯೋ ನೋಡಿ - leopard enters a house,
ಚಿರತೆಯೊಂದು ಮನೆಗೆ ನುಗ್ಗಿ ಆತಂಕ ಸೃಷ್ಟಿಸಿರುವ ಘಟನೆ ಗುಜರಾತ್ನ ಕಛ್ ಜಿಲ್ಲೆಯಲ್ಲಿ ನಡೆದಿದೆ. ಇಂದು ಬೆಳಗ್ಗೆ ನಖತ್ರಾನ ತಾಲೂಕಿನ ಗೊದ್ಹಿಯಾರ್ ಗ್ರಾಮದ ನಿವಾಸಿ ಸೋದಾ ಹಿರ್ಜಿ ವರ್ಧಾಜಿ ಕುಟುಂಬವರು ಎಮ್ಮೆ ಮೇಯಿಸಲು ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಚಿರತೆ ನುಗ್ಗಿದೆ. ಇದನ್ನು ನೋಡಿದ ಗ್ರಾಮಸ್ಥರು ಆ ಚಿರತೆಯನ್ನು ಮನೆಯೊಳಗೆ ಕೂಡಿಹಾಕಿದ್ರು. ಇನ್ನು ಮನೆಯೊಳಗೆ ಚಿರತೆಯಾಡಿದ ಚೆಲ್ಲಾಟವನ್ನು ಗ್ರಾಮಸ್ಥರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದ್ದಾರೆ. ಸುದ್ದಿ ತಿಳಿದ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ಕೈಗೊಂಡಿದ್ದಾರೆ.
Last Updated : Jan 20, 2020, 12:53 PM IST