ವಾಜಪೇಯಿಗೆ ರಾಷ್ಟ್ರಪತಿ, ಪ್ರಧಾನಿ ನಮನ: ಭಜನೆ ಮೂಲಕ ಅಜಾತಶತ್ರುವಿನ ಸ್ಮರಣೆ - Sadaiv Atal Samadhi
ನವದೆಹಲಿ: ಇಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿವರ 96ನೇ ಜನ್ಮದಿನ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಆರೋಗ್ಯ ಸಚಿವ ಹರ್ಷವರ್ಧನ್ ಸೇರಿದಂತೆ ಗಣ್ಯರು ದೆಹಲಿಯ ಸದೈವ ಅಟಲ್ನಲ್ಲಿರುವ ವಾಜಪೇಯಿ ಸ್ಮಾರಕಕ್ಕೆ ನಮಿಸಿದರು. ಇದೇ ವೇಳೆ ಮಹಾನ್ ನಾಯಕನ ಸ್ಮರಣಾರ್ಥವಾಗಿ ಭಜನಾ ಕಾರ್ಯಕ್ರಮ ಆಯೋಜಿಸಲಾಗಿದ್ದು, ಗಣ್ಯರೆಲ್ಲರೂ ಪಾಲ್ಗೊಂಡಿದ್ದರು.