ರೌಡಿ ಗ್ಯಾಂಗ್ನಿಂದ ವಕೀಲನ ಭೀಕರ ಹತ್ಯೆ: ಸಿಸಿಟಿವಿಯಲ್ಲಿ ದೃಶ್ಯಾವಳಿ ಸೆರೆ! - ತಮಿಳುನಾಡಿನ ಚೆನ್ನೈ
ಚೆನ್ನೈ: ಏಳು ಮಂದಿ ರೌಡಿ ಗ್ಯಾಂಗ್ವೊಂದು ವಕೀಲರ ಹತ್ಯೆ ಮಾಡಿದ್ದು, ಸಿಸಿಟಿವಿ ದೃಶ್ಯಾವಳಿ ಬಿಡುಗಡೆಯಾಗಿವೆ. ತಮಿಳುನಾಡಿನ ಚೆನ್ನೈನಲ್ಲಿ ಈ ಘಟನೆ ನಡೆದಿದೆ. ವಿಲ್ಲಿವಕ್ಕಂ ಹೈ ಸ್ಟ್ರೀಟ್ನಲ್ಲಿ ವಾಸವಾಗಿದ್ದ ರಾಜೇಶ್(38) ಎಗ್ಮೋರ್ ನ್ಯಾಯಾಲಯದಲ್ಲಿ ವಕೀಲರಾಗಿದ್ದರು. ಇವರ ಪತ್ನಿ ರಮ್ಯಾ ರಾಜಕಾರಣಿ. ರಾಜೇಶ್ ಅವರ ಸೋದರ ಮಾವ ಪಾಮ್ ಸೋಮು ರೌಡಿಯಾಗಿದ್ದು, ಈತನ ಮೇಲೆ ಕೊಲೆ, ದರೋಡೆ ಸೇರಿದಂತೆ ವಿವಿಧ ಪ್ರಕರಣಗಳಿವೆ. ನಿನ್ನೆ ರಾತ್ರಿ ರೌಡಿಗಳು ರಾಜೇಶ್ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ವಕೀಲ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. 2015ರಲ್ಲಿ ನಡೆದ ಕೊಲೆ ಪ್ರಕರಣದ ತೀರ್ಪು ನೀಡಿದ್ದ ವಕೀಲರಲ್ಲಿ ಇವರು ಒಬ್ಬರಾಗಿದ್ದು, ಅದೇ ಕಾರಣಕ್ಕಾಗಿ ಕೊಲೆ ಮಾಡಲಾಗಿದೆ ಎಂಬ ಮಾತು ಕೇಳಿ ಬಂದಿದೆ.