ಕರ್ನಾಟಕ

karnataka

ETV Bharat / videos

ಹಿಮಾಚಲದ ಲಾಹೌಲ್​ ಸ್ಪಿತಿಯಲ್ಲಿ ಭಾರಿ ಭೂಕುಸಿತ; ನದಿಯ ಹರಿವು ನಿಲ್ಲಿಸಿದ ಮಣ್ಣಿನ ರಾಶಿ

By

Published : Aug 13, 2021, 12:46 PM IST

Updated : Aug 13, 2021, 1:38 PM IST

ಹಿಮಾಚಲ ಪ್ರದೇಶ: ಕಿನ್ನೌರ್ ಜಿಲ್ಲೆಯಲ್ಲಿ ಸಂಭವಿಸಿದ ದುರಂತದ ನಂತರ ಇದೀಗ ಲಾಹೌಲ್​ ಸ್ಪಿತಿಯಲ್ಲೂ ಭಾರೀ ಪ್ರಮಾಣದ ಗುಡ್ಡ ಕುಸಿದಿದೆ. ಬೆಟ್ಟದಿಂದ ಅಪಾರ ಪ್ರಮಾಣದ ಕಲ್ಲು-ಮಣ್ಣಿನ ರಾಶಿ ನದಿಗೆ ಜಾರಿ ಬಿದ್ದಿದೆ. ಪರಿಣಾಮ ಚೆನಾಬ್‌ ನದಿಯ ಹರಿವಿಗೆ ಸಂಪೂರ್ಣ ಅಡಚಣೆಯಾಗಿದೆ. ಈ ಬೆಟ್ಟ ಬಿರುಕು ಬೀಡುವ ಶಬ್ದ ಬೆಳಗ್ಗೆ 9ಗಂಟೆಯಿಂದ ಕೇಳುತ್ತಿದೆ ಎಂದು ಇಲ್ಲಿನ ಜನರು ಹೇಳಿದ್ದಾರೆ. ಜಹಲ್ಮಾದಿಂದ ಕಿಲ್ಲಾದ್ ಕಣಿವೆಯವರೆಗಿನ ರಸ್ತೆಯಲ್ಲಿ ವಾಸಿಸುವ ಜನರು ಅಪಾಯ ಎದುರಿಸುತ್ತಿದ್ದಾರೆ. ನದಿಗೆ ಮಣ್ಣಿನ ರಾಶಿ ಬಿದ್ದ ಪರಿಣಾಮ ಜುಂಡಾದಿಂದ ಜೋಬ್ರಾಂಗ್​ವರೆಗಿನ ನದಿ ತೀರದ ಜನರು ಪ್ರವಾಹ ಭೀತಿ ಎದುರಿಸುತ್ತಿದ್ದಾರೆ. ಜುಲೈ ಮತ್ತು ಆಗಸ್ಟ್‌ನಲ್ಲಿ ಹಿಮಾಚಲ ಪ್ರದೇಶದಲ್ಲಿ ಅನೇಕ ಪ್ರಕೃತಿ ವಿಕೋಪಗಳು ಸಂಭವಿಸಿವೆ. ಕಿನ್ನೌರ್​ನಲ್ಲಿಯೇ ಸುಮಾರು ಎರಡು ದಿನಗಳ ಅವಧಿಯಲ್ಲಿ ಎರಡು ದೊಡ್ಡ ಭೂಕುಸಿತಗಳು ಸಂಭವಿಸಿವೆ.
Last Updated : Aug 13, 2021, 1:38 PM IST

ABOUT THE AUTHOR

...view details