ಹಸು ಬೇರೆಯವರ ಜಮೀನಿನಲ್ಲಿ ಹೋಗಿರುವುದೇ ತಪ್ಪಾಯ್ತು... ಮಹಿಳೆ ಮೇಲೆ ಮಾರಣಾಂತಿಕವಾಗಿ ಹಲ್ಲೆ - ಜಮೀನು ಮಾಲಿಕ
ಜೋಧಪುರ್: ಹಸುವೊಂದು ಬೇರೆಯವರ ಜಮೀನಲ್ಲಿ ಹೋಗಿದ್ದರಿಂದ ಆಕ್ರೋಶಗೊಂಡು ಮಹಿಳೆಯೋರ್ವಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ರಾಜಸ್ಥಾನದ ಜೋಧಪುರ್ದಲ್ಲಿ ನಡೆದಿದೆ. ಹಸು ಮೇಯಿಸಲು ಆಗಿಮಿಸಿದ್ದ ಮಹಿಳೆ ಕಣ್ಣು ತಪ್ಪಿಸಿ ಅದು ಬೇರೊಬ್ಬರ ಜಮೀನಿನಲ್ಲಿ ಹೋಗಿದೆ. ಜಮೀನು ಮಾಲಿಕ ಅದನ್ನ ನೋಡಿದ್ದು, ತಕ್ಷಣವೇ ಮಹಿಳೆ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.