ಮೋದಿ ಮೆಚ್ಚಿದ ಸಂಸದನಿಂದ ಭರ್ಜರಿ ಡ್ಯಾನ್ಸ್.. ಲಡಾಖ್ನಲ್ಲಿ ಕಳೆಗಟ್ಟಿದ ಸ್ವಾತಂತ್ರ್ಯ ಸಂಭ್ರಮ..! - ಬಿಜೆಪಿ ಸಂಸದ ಜಮ್ಯಾಂಗ್ ಸೆರಿಂಗ್ ನಮ್ಗ್ಯಾಲ್
ನೂತನ ಕೇಂದ್ರಾಡಳಿತ ಪ್ರದೇಶ ರಚನೆಯಾದ ಬಳಿಕ ಮೊದಲ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ಲಡಾಖ್ನಲ್ಲಿ ಇಂದು ಸಂಭ್ರಮ ಮನೆ ಮಾಡಿದೆ. ಲಡಾಖ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಬಿಜೆಪಿ ಸಂಸದ ಜಮ್ಯಾಂಗ್ ಸೆರಿಂಗ್ ನಮ್ಗ್ಯಾಲ್ ಕ್ಷೇತ್ರದ ಜನಗಳೊಂದಿಗೆ ನೃತ್ಯ ಮಾಡಿ ಖುಷಿಪಟ್ಟಿದ್ದಾರೆ. ಇತ್ತೀಚೆಗೆ ನಮ್ಗ್ಯಾಲ್ ಲೋಕಸಭೆಯಲ್ಲಿ ಅದ್ಭುತ ಭಾಷಣ ಮಾಡಿ ಪ್ರಧಾನಿ ಮೋದಿ ಮೆಚ್ಚುಗೆಗೆ ಪಾತ್ರರಾಗಿದ್ದರು.