ಕರ್ನಾಟಕ

karnataka

ETV Bharat / videos

ಕೋಯಿಕ್ಕೋಡ್​ನಿಂದ ನೇಪಾಳಕ್ಕೆ ಸೈಕಲ್​ ಸವಾರಿ: ಇಂಧನ ಬೆಲೆ ಏರಿಕೆಯ ವಿರುದ್ಧ ಶಿಕ್ಷಕನ ಪ್ರತಿಭಟನೆ - physical training teacher

By

Published : Apr 11, 2021, 3:16 PM IST

ಕಾಸರಗೋಡು (ಕೇರಳ): ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕುಸಿದಿದ್ದರೂ ಭಾರತದಲ್ಲಿ ಇಂಧನ ಬೆಲೆ ಇಳಿಕೆಯಾಗದಿರುವುದರ ವಿರುದ್ಧ ಕೇರಳದ ತಲಶ್ಶೇರಿ ಅಮೃತ ವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ತರಬೇತಿ ಶಿಕ್ಷಕನಾಗಿರುವ ಅಖಿಲೇಶ್ ಅಚು ವಿಭಿನ್ನವಾಗಿ ಪ್ರತಿಭಟಿಸುತ್ತಿದ್ದಾರೆ. ಸೈಕಲ್​ ತುಳಿದುಕೊಂಡೇ ಕೋಯಿಕ್ಕೋಡ್​ನಿಂದ ನೇಪಾಳ ಪ್ರವಾಸಕ್ಕೆ ಹೊರಟಿದ್ದಾರೆ. ಶುಕ್ರವಾರ ಕಾಸರಗೋಡು ತಲುಪಿರುವ ಅಖಿಲೇಶ್​, ಇಂಧನ ಬೆಲೆ ಏರಿಕೆ ಎಂಬುದು ರಾಜಕೀಯ ಪಕ್ಷಗಳಿಗೆ ಸೀಮಿತವಾದ ವಿಚಾರವಲ್ಲ. ಇದರ ವಿರುದ್ಧ ದನಿ ಎತ್ತುವುದು ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿಯಾಗಿದೆ ಎಂಬ ಸಂದೇಶವನ್ನು ಯುವಕರಿಗೆ ರವಾನಿಸಿದ್ದಾರೆ.

ABOUT THE AUTHOR

...view details