ಬಾಲಿವುಡ್ ಬಾದ್ ಶಾ ಮೇಣದ ಪ್ರತಿಮೆ ನಿರ್ಮಿಸಿದ ಅಭಿಮಾನಿ - ಕೊಟ್ಟಾಯಂ ಕಲಾವಿದ
ಕೊಟ್ಟಾಯಂ: ಕೇರಳದ ಕೊಟ್ಟಾಯಂನಲ್ಲಿ ಬೇಬಿ ಅಲೆಕ್ಸ್ ಎಂಬ ಕಲಾವಿದನೋರ್ವ ತಮ್ಮ ನೆಚ್ಚಿನ ಬಾಲಿವುಡ್ ನಟ ಶಾರುಖ್ ಖಾನ್ ಅವರ ಮೇಣದ ಪ್ರತಿಮೆಯನ್ನು ನಿರ್ಮಿಸಿದ್ದಾರೆ. ಇವರು ಈ ಹಿಂದೆ ಚಾರ್ಲಿ ಚಾಪ್ಲಿನ್, ಮದರ್ ಥೆರೇಸಾ ಸೇರಿದಂತೆ ಇತರ ಪ್ರಸಿದ್ಧ ವ್ಯಕ್ತಿಗಳ ಮೇಣದ ಪ್ರತಿಮೆಗಳನ್ನೂ ರಚಿಸಿ ಸೈ ಅನಿಸಿಕೊಂಡಿದ್ದರು. ಇದೀಗ ನಿರ್ಮಿಸಿರುವ ಬಾಲಿವುಡ್ ಕಿಂಗ್ ಖಾನ್ ಪ್ರತಿಮೆ ಗಮನ ಸೆಳೆಯುತ್ತಿದೆ.