128 ಕೋಟಿ ಜನ ಒಬ್ಬ ವ್ಯಕ್ತಿಯನ್ನು ನಂಬಿದ್ದಾರೆ, ಅದು ಮೋದಿ: ಬಿಜೆಪಿ ಸೇರಿದ ಖುಷ್ಬೂ ಮಾತು! - ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ಖುಷ್ಬೂ
ನವದೆಹಲಿ: ಕಳೆದ ಆರು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿದ್ದ ನಟಿ ಖುಷ್ಬೂ ಇದೀಗ ಭಾರತೀಯ ಜನತಾ ಪಾರ್ಟಿ ಸೇರಿಕೊಂಡಿದ್ದಾರೆ. ಇದಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿ ನನಗೆ ಏನು ಮಾಡಲಿದೆ ಎಂಬುದು ಮುಖ್ಯವಲ್ಲ, ಆದರೆ ದೇಶದ ಜನರಿಗಾಗಿ ಅದು ಏನು ಮಾಡಲಿದೆ ಎಂಬುದು ಮಹತ್ವದಾಗುತ್ತದೆ. ದೇಶದ 128 ಕೋಟಿ ಜನರು ಕೇವಲ ಓರ್ವ ವ್ಯಕ್ತಿ ಮೇಲೆ ನಂಬಿಕೆ ಇಟ್ಟಿದ್ದಾರೆ ಅದು ನಮ್ಮ ಪ್ರಧಾನಮಂತ್ರಿ. ಅವರು ದೇಶಕ್ಕಾಗಿ ಏನನ್ನಾದರೂ ಮಾಡುತ್ತಿದ್ದಾರೆ ಎಂದು ನಾನು ಭಾವಿಸಿದ್ದೇನೆ ಎಂದಿದ್ದಾರೆ.