ಕೈಯಿಂದ ಕಮಲಕ್ಕೆ ಜಿಗಿದ ನಟಿ ಖುಷ್ಬೂ: 10 ವರ್ಷದಲ್ಲಿ ಮೂರು ಬಾರಿ ಪಕ್ಷಾಂತರ - ಪ್ರಧಾನಿ ನರೇಂದ್ರ ಮೋದಿ
ನಟಿ ಖುಷ್ಬೂ ಇಂದು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸಮ್ಮುಖದಲ್ಲಿ ಸೇರ್ಪಡೆಯಾಗಿದ್ದಾರೆ. ಬಳಿಕ ಮಾತನಾಡಿದ ಅವರು ''ನಾನು ಇಂದು ಬಿಜೆಪಿ ಸದಸ್ಯಳಾಗಿದ್ದೇನೆ. ನಮ್ಮ ದೇಶ ಮುಂದಕ್ಕೆ ಸಾಗಬೇಕಾದರೆ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ನಮಗೆ ಬೇಕು. ಮೋದಿಯವರ ನಾಯಕತ್ವದಲ್ಲಿ ದೇಶ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಬಿಜೆಪಿ ನೀಡುವ ಜವಾಬ್ದಾರಿಗಳನ್ನು ನಾನು ನಿರ್ವಹಿಸುತ್ತೇನೆ ಎಂದು ಭರವಸೆ ನೀಡುತ್ತೇನೆ' ಎಂದಿದ್ದಾರೆ.
Last Updated : Oct 12, 2020, 3:12 PM IST