ಭವಿಷ್ಯದಲ್ಲಿ ಏನ್ ಆಗ್ತೀರಾ ಮಕ್ಕಳೇ? ತೊಡೆ ಮೇಲೆ ಮಕ್ಕಳಿಬ್ಬರನ್ನ ಕುಳ್ಳರಿಸಿಕೊಂಡು ರಾಗಾ ಮಾತು! - ಮಲಪ್ಪುರಂನಲ್ಲಿ ರಾಹುಲ್
ಮಲಪ್ಪುರಂ(ಕೇರಳ): ದೇವರ ನಾಡು ಕೇರಳ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಮಲಪ್ಪುರಂನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದರು. ಇದಕ್ಕೂ ಮುಂಚಿತವಾಗಿ ವೇದಿಕೆ ಮೇಲೆ ಕುಳಿತುಕೊಂಡಿದ್ದ ರಾಗಾ, ಇಬ್ಬರು ಬಾಲಕಿಯರೊಂದಿಗೆ ಸಂಭಾಷಣೆ ನಡೆಸಿದರು. ಭವಿಷ್ಯದಲ್ಲಿ ಏನು ಆಗಲು ಬಯಸುತ್ತೀರಿ ಎಂದು ಕಾಂಗ್ರೆಸ್ ಮುಖಂಡ ಪ್ರಶ್ನೆ ಮಾಡಿದ್ದು, ಈ ವೇಳೆ ಓರ್ವ ಬಾಲಕಿ ವೈದ್ಯನಾಗುವುದಾಗಿ ಹಾಗೂ ಮತ್ತೋರ್ವಳು ಪೊಲೀಸ್ ಆಗಲು ಬಯಸುವುದಾಗಿ ಹೇಳಿದ್ದಾಳೆ. ಬಡವರ ರಕ್ಷಣೆ ಮಾಡುವ ಉದ್ದೇಶದಿಂದ ತಾನು ಪೊಲೀಸ್ ಆಗಲು ಇಷ್ಟಪಡುವುದಾಗಿ ಬಾಲಕಿ ಹೇಳಿಕೊಂಡಿದ್ದಾಳೆ.