ಹಿಮದ ಹೊದಿಕೆಯಲ್ಲಿ ಕಣಿವೆ ರಾಜ್ಯ: ನಾಲ್ಕು ದಿನದಿಂದ ರಸ್ತೆಗಳೆಲ್ಲ ಬಂದ್ ಬಂದ್..! - ವಾಹನ ಸಂಚಾರ ಕಡಿತ
ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಕಳೆದೊಂದು ವಾರದಿಂದ ಹಿಮಪಾತವಾಗುತ್ತಿದ್ದು, ಕೇಂದ್ರಾಡಳಿತ ಪ್ರದೇಶದ ಹಲವು ರಸ್ತೆಗಳು ಬಂದ್ ಆಗಿವೆ. ಇದಲ್ಲದೆ ಭಾನುವಾರದಿಂದ ಕಾಶ್ಮೀರಕ್ಕೆ ವಿಮಾನ ಹಾರಾಟ ರದ್ದಾಗಿದೆ. ಕಳೆದ ನಾಲ್ಕು ದಿನದಿಂದ ಮೊಘಲ್ ರಸ್ತೆ ಸಂಪೂರ್ಣ ಬಂದ್ ಆಗಿದ್ದು, ಸಂಚಾರಕ್ಕೆ ಇನ್ನೂ ಮುಕ್ತವಾಗಿಲ್ಲ. ಅಲ್ಲದೆ ಅಂತರ್ ಜಿಲ್ಲಾ ರಸ್ತೆಗಳು ಭಾಗಶಃ ಮುಚ್ಚಿದ್ದು, ಹಲವು ಕಡೆ ವಾಹನ ಸಂಚಾರ ಕಡಿತಗೊಂಡಿದೆ. ಜಿಲ್ಲೆಯ ಆಸ್ಪತ್ರೆ ಹಾಗೂ ಕೆಲವು ಸರ್ಕಾರಿ ಕಚೇರಿ ಸಂಪರ್ಕಿಸುವ ರಸ್ತೆಗಳಲ್ಲಿ ಮಾತ್ರ ಹಿಮ ತೆರವು ಕಾರ್ಯಾಚರಣೆ ಮಾಡಲು 200ಕ್ಕೂ ಹೆಚ್ಚು ವಾಹನಗಳನ್ನು ನಿಯೋಜಿಸಲಾಗಿದೆ.