ಕರ್ನಾಟಕದಲ್ಲಿ ಬಿಜೆಪಿ ಕಮಾಲ್... ಬಿಎಸ್ವೈಗೆ ವಿಶ್ ಮಾಡಿ ಕರ್ನಾಟಕದ ಜನತೆಗೆ ಕೃತಜ್ಞತೆ ಅರ್ಪಿಸಿದ ನಮೋ! - ಬಿಎಸ್ವೈಗೆ ಮೋದಿ ವಿಶ್
ಹಜಾರಿಭಾಗ್(ಜಾರ್ಖಂಡ್): ರಾಜ್ಯದಲ್ಲಿ ನಡೆದ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ 12ರಲ್ಲಿ ಗೆಲುವು ದಾಖಲು ಮಾಡಿದ್ದು, ಸ್ಪಷ್ಟ ಬಹುಮತ ಗಳಿಕೆ ಮಾಡಿದೆ. ಇದೇ ವಿಷಯದ ಬಗ್ಗೆ ಜಾರ್ಖಂಡ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದು, ರಾಜಕೀಯ ಸ್ಥಿರತೆಗಾಗಿ ದೇಶ ಏನು ಯೋಚಿಸುತ್ತದೆ? ದೇಶವು ಬಿಜೆಪಿಯನ್ನು ಎಷ್ಟು ನಂಬುತ್ತದೆ ಎಂಬುದು ನಿಮ್ಮ ಮುಂದೆ ಇದೆ. ಕರ್ನಾಟಕದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಕರ್ನಾಟಕದ ಜನರಿಗೆ ನನ್ನ ಕೃತಜ್ಞತೆಯನ್ನು ಅರ್ಪಿಸುತ್ತೇನೆ ಎಂದಿದ್ದಾರೆ.