ಶ್ರೀಶೈಲಂ ಶಿವ ದೇಗುಲದಲ್ಲಿ ಯುಗಾದಿ: ಬೆಂಕಿ ಕೆಂಡಗಳ ಮೇಲೆ ನಡೆದು ಕನ್ನಡಿಗರ ಸಾಹಸ - ಯುಗಾದಿ
ಶ್ರೀಶೈಲಂ(ಆಂಧ್ರಪ್ರದೇಶ): ಯುಗಾದಿ ಹಬ್ಬವನ್ನು ನಿನ್ನೆ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಬಹಳ ಅದ್ಧೂರಿಯಾಗಿ ಆಚರಿಸಲಾಯಿತು. ಕರ್ನೂಲ್ ಜಿಲ್ಲೆಯ ಶ್ರೀಶೈಲಂನ ಶಿವ ದೇವಾಲಯದಲ್ಲಿ ಸಹ ಯುಗಾದಿ ಆಚರಣೆ ಮಾಡಿದ್ದು, ಸಹಸ್ರಾರು ಭಕ್ತರು ದೇವರ ದರ್ಶನ ಪಡೆದುಕೊಂಡರು. ಹಬ್ಬದ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕದ ವೀರಶೈವ ಭಕ್ತರು ಕತ್ತಿಗಳನ್ನು ಹಿಡಿದು ಸಾಹಸ ಪ್ರದರ್ಶಿಸಿದರು. ನಂತರ ಬೆಂಕಿ ಕೆಂಡಗಳ ಮೇಲೆ ನಡೆಯುವ ಮೂಲಕ ಅಚ್ಚರಿ ಮೂಡಿಸಿದರು.
Last Updated : Apr 14, 2021, 9:03 AM IST