ಬಾರಾಮುಲ್ಲಾದಲ್ಲಿ ಗ್ರೆನೇಡ್ ದಾಳಿ, ಅನೇಕರಿಗೆ ಗಾಯ, ದೃಶ್ಯ ಸಿಸಿಟಿವಿಯಲ್ಲಿ ಸೆರೆ - ಬಾರಾಮುಲ್ಲಾದಲ್ಲಿ ಗ್ರೆನೇಡ್ ದಾಳಿ
ಶ್ರೀನಗರ: ಭಾರತೀಯ ಯೋಧರ ಗುರಿಯಾಗಿಸಿ ನಡೆಸಿದ ಗ್ರೆನೇಡ್ ದಾಳಿಯಲ್ಲಿ ಅನೇಕ ನಾಗರಿಕರು ಗಾಯಗೊಂಡಿರುವ ಘಟನೆ ಜಮ್ಮು-ಕಾಶ್ಮೀರದ ಬಾರಾಮುಲ್ಲಾದಲ್ಲಿ ನಡೆದಿದೆ. ಯೋಧರ ವಾಹನ ಗುರಿಯಾಗಿಸಿ ಆಜಾದ್ ಗುಂಜ್ ಬ್ರಿಡ್ಜ್ ಬಳಿ ಈ ದಾಳಿ ನಡೆಸಲಾಗಿದೆ. ಆದರೆ ದೊಡ್ಡ ಮಟ್ಟದ ದಾಳಿ ತಪ್ಪಿ, ಸ್ಫೋಟಗೊಂಡಿರುವ ಕಾರಣ ಕೆಲ ನಾಗರಿಕರು ಗಾಯಗೊಂಡಿದ್ದಾರೆ. ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.