Watch - ಹಿಮದ ಹೊದಿಕೆಯಲ್ಲಿ ಜಮ್ಮು-ಕಾಶ್ಮೀರ - Gulmarg snowfall
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಮಮಳೆ ಸುರಿಯುತ್ತಿದ್ದು, ಪ್ರವಾಸಿಗರು ಪ್ರಕೃತಿಯ ಸೌಂದರ್ಯದಲ್ಲಿ ಮಿಂದೇಳುತ್ತಿದ್ದಾರೆ. ಶ್ರೀನಗರ, ಗುಲ್ಮಾರ್ಗ್, ಶೋಪಿಯಾನ್ ಸೇರಿದಂತೆ ಗುಡ್ಡಗಾಡು ಪ್ರದೇಶಗಳು ಶ್ವೇತವರ್ಣದ ಸೀರೆಯನ್ನು ಹೊದಿಕೆ ಮಾಡಿಕೊಂಡಂತೆ ಕಾಣುತ್ತಿವೆ. ಮತ್ತೊಂದೆಡೆ ಭಾರಿ ಚಳಿಗೆ ಇಲ್ಲಿನ ಜನರು ತತ್ತರಿಸಿದ್ದಾರೆ. ಕಳೆದ ರಾತ್ರಿ ಶ್ರೀನಗರದಲ್ಲಿ ಮೈನಸ್ 0.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.