ಬಾಲಾಶ್ರಮದಿಂದ ಮೂರು ವರ್ಷದ ಮಗುವನ್ನು ದತ್ತು ಪಡೆದ ಇಟಲಿ ದಂಪತಿ! - ಮೂರು ವರ್ಷದ ಮಗುವನ್ನು ದತ್ತು ಪಡೆದ ಇಟಲಿ ದಂಪತಿ
ಬೆಹ್ರಾಂಪುರ(ಒಡಿಶಾ): ಉಟ್ಕಲ್ ಬಾಲಾಶ್ರಮದಲ್ಲಿದ್ದ ಮೂರು ವರ್ಷದ ಹೆಣ್ಣು ಮಗುವನ್ನು ಇಟಲಿ ದಂಪತಿ ದತ್ತು ಪಡೆದಿದ್ದಾರೆ. ಸ್ನೇಹಾ ಎಂಬ ಮಗುವನ್ನು ಡಿಸೆಂಬರ್ 4, 2017ರಲ್ಲಿ ಜಿಲ್ಲೆಯ ಪರಿತ್ಯಕ್ತದಲ್ಲಿ ರಕ್ಷಿಸಿ, ಆರೈಕೆ ಮಾಡಲಾಯ್ತು. ಸುಮಾರು 3 ವರ್ಷಗಳ ನಂತರ ಲಿಗುರಿಯಾ ಪ್ರದೇಶದ ರಾಜಧಾನಿಯಾದ ಜಿನೋವಾದಿಂದ ಬಂದ ದಂಪತಿ ಮಗುವನ್ನು ದತ್ತು ಪಡೆದಿದ್ದಾರೆ. ನಿಕೋಲಾ ಗ್ಯಾಂಬರೋ ಮತ್ತು ಎಲಿಸಾ ಉಬೆಜಿಯೋಗೆ ಕಲೆಕ್ಟರ್ ಅಮೃತ ಕುಲಂ ಮಗುವನ್ನು ಕಾನೂನಿನ ಪ್ರಕಾರ ಹಸ್ತಾಂತರಿಸಿದ್ದಾರೆ. ಈವರೆಗೆ 21 ಮಕ್ಕಳನ್ನು ಭಾರತದ ವಿವಿಧ ರಾಜ್ಯಗಳ ದಂಪತಿ ದತ್ತು ಪಡೆದಿದ್ದಾರೆ. ಸದ್ಯ ಸ್ನೇಹ ಇಟಲಿ ದಂಪತಿ ಮಗಳಾಗಿದ್ದು, ಅವಳ ಭವಿಷ್ಯ ಉಜ್ವಲಿಸಲಿ ಅನ್ನೋದು ಎಲ್ಲರ ಹಾರೈಕೆ.