ಕರ್ನಾಟಕ

karnataka

ETV Bharat / videos

ಕೋತಿಗಳಿಂದ ತಪ್ಪಿಸಿಕೊಳ್ಳಲು ಹೋಗಿ ಹಾಸ್ಟೆಲ್​ ಕಟ್ಟಡದ ಮೇಲಿಂದ ಬಿದ್ದು ವಿದ್ಯಾರ್ಥಿನಿ ಸಾವು!

By

Published : Mar 11, 2021, 7:14 PM IST

ವಾರಂಗಲ್​(ತೆಲಂಗಾಣ): ಕೋತಿಗಳ ಭಯದಿಂದ ತಪ್ಪಿಸಿಕೊಳ್ಳಲು ಹೋಗಿ ವಿದ್ಯಾರ್ಥಿನಿವೋರ್ವಳು ಹಾಸ್ಟೆಲ್​​ ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ್ದು, ತೆಲಂಗಾಣದ ವಾರಂಗಲ್​​ನಲ್ಲಿ ಈ ಘಟನೆ ನಡೆದಿದೆ. ಶಿರಿಶಾ ಎಂಸಿಎ ಶಿಕ್ಷಣ ಪಡೆದುಕೊಂಡಿದ್ದು, ವಾರಂಗಲ್​ ಜಿಲ್ಲೆಯ ಬಟುಪಲ್ಲಿಯಲ್ಲಿ ವೃತ್ತಿಪರ ಕೌಶಲ್ಯ ತರಬೇತಿ ಪಡೆದುಕೊಳ್ಳಲು ತನ್ನ ಸ್ನೇಹಿತರೊಂದಿಗೆ ಹಾಸ್ಟೆಲ್​ನಲ್ಲಿ ಉಳಿದುಕೊಂಡಿದ್ದಳು. ಕಟ್ಟಡದ ಖಾಲಿ ಜಾಗದಲ್ಲಿ ಬ್ಯಾಡ್ಮಿಂಟನ್​ ಆಡುತ್ತಿದ್ದಾಗ ಕೋತಿಗಳ ಗುಂಪು ಅಲ್ಲಿಗೆ ಬಂದಿದೆ. ಅವುಗಳಿಂದ ತಪ್ಪಿಸಿಕೊಳ್ಳಲು ಅವರು ಓಡಿ ಹೋಗಿದ್ದಾರೆ. ಇದೇ ವೇಳೆ ವಿದ್ಯಾರ್ಥಿನಿ ಕೆಳಗೆ ಬಿದ್ದಿದ್ದು, ತಲೆಗೆ ಗಂಭೀರ ಗಾಯವಾಗಿ ಸಾವನ್ನಪ್ಪಿದ್ದಾಳೆ.

ABOUT THE AUTHOR

...view details