ಹಸಿವಿನಿಂದ ಸಾಯುವ ಬದ್ಲು, ಕೊರೊನಾದಿಂದ ಸಾಯೋದೇ ಲೇಸು ಎಂದ ಕಾರ್ಮಿಕರು! - ಲಾಕ್ಡೌನ್ ತೊಂದರೆ
ನವದೆಹಲಿ: ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ಕಂಡು ಕೇಳರಿಯದ ರೀತಿಯಲ್ಲಿ ತನ್ನ ಅಟ್ಟಹಾಸ ತೋರುತ್ತಿದೆ. ಇದರಿಂದ ಜನರು ಪ್ರತಿದಿನ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಹಾಮಾರಿಯಿಂದ ಹೊರಬರಲು ಈಗಾಗಲೇ 21 ದಿನಗಳ ಕಾಲ ಲಾಕ್ಡೌನ್ ಮಾಡಿ ಆದೇಶ ಹೊರಡಿಸಲಾಗಿದೆ. ಇದು ದೈನಂದಿನ ಕೂಲಿ ಕಾರ್ಮಿಕರ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ದೆಹಲಿಯ ಫತೇಪುರ್ ಬೇರಿಯಲ್ಲಿ ವಾಸವಾಗಿರುವ ಕೂಲಿ ಕಾರ್ಮಿಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಆಹಾರ ಮತ್ತು ನೀರಿಲ್ಲದೆ ಜೀವನ ಸಾಗಿಸುತ್ತಿದ್ದೇವೆ. ನಮಗೆ ಸಹಾಯ ಮಾಡುವಂತೆ ಸರ್ಕಾರವನ್ನ ಕೋರುತ್ತಿದ್ದೇವೆ. ಹಸಿವಿನಿಂದ ಸಾಯುವ ಬದಲು ಈ ಕಾಯಿಲೆಯಿಂದ(ಕೊವಿಡ್-19) ಸಾಯುವುದೇ ಲೇಸು ಎಂದು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.