ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಗೆ ಹಾಡಿನ ಮೂಲಕ ಧೈರ್ಯ ತುಂಬಿದ ಐಜಿಪಿ - ಮಹಾಮಾರಿ ಕೊರೊನಾ
ಮಹಾಮಾರಿ ಕೊರೊನಾ ಹೊಡೆದೋಡಿಸಲು ಪೊಲೀಸರು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ದಿನದ 24 ಗಂಟೆ ಕಾರ್ಯನಿರ್ವಹಿಸಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಹೀಗೆ ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿಯ ಮನೋಬಲ ಹೆಚ್ಚಿಸಲು ಮಧ್ಯಪ್ರದೇಶ ಐಜಿಪಿ ವಿವೇಕ್ ಶರ್ಮಾ ಮುಂದಾದರು. ತಮ್ಮ ಕಚೇರಿಯಲ್ಲಿ ಕುಳಿತು 'ಹಮ್ ಹೊಂಗೆ ಕಾಮಿಯಾಬ್' ಎಂಬ ಹಾಡು ಹಾಡಿ ಆತ್ಮವಿಶ್ವಾಸ ವೃದ್ಧಿಸುವ ಸ್ಫೂರ್ತಿದಾಯಕ ಮಾತುಗಳನ್ನಾಡಿದರು.