ಭೂತಾನ್ ಬೆನ್ನಲ್ಲೇ ನೇಪಾಳ, ಬಾಂಗ್ಲಾದೇಶಕ್ಕೂ ಕೊವಿಶೀಲ್ಡ್ ಲಸಿಕೆ ರವಾನಿಸಿದ ಭಾರತ
ಮುಂಬೈ: ಮಹಾಮಾರಿ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತ ನೆರೆಯ ದೇಶಗಳಿಗೂ ಸಹಾಯ ಮಾಡ್ತಿದ್ದು, ನಿನ್ನೆ ಭೂತಾನ್ಗೆ 1.5 ಲಕ್ಷ ಡೋಸ್ ಕೊವಿಶೀಲ್ಡ್ ವ್ಯಾಕ್ಸಿನ್ ರವಾನೆ ಮಾಡಿತ್ತು. ಇದೀಗ ಮತ್ತೆ ಎರಡು ದೇಶಗಳಿಗೆ ಲಸಿಕೆ ರಫ್ತು ಮಾಡಿದೆ. ನೇಪಾಳ ರಾಜಧಾನಿ ಕಂಠ್ಮಡುವಿಗೆ 10 ಲಕ್ಷ ಡೋಸ್ ಹಾಗೂ ಬಾಂಗ್ಲಾದೇಶದ ಢಾಕಾಗೆ 20 ಲಕ್ಷ ವ್ಯಾಕ್ಸಿನ್ ರವಾನೆ ಮಾಡಿದೆ. ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಅಭಿವೃದ್ಧಿಗೊಳ್ಳುತ್ತಿರುವ ಕೊವಿಶೀಲ್ಡ್ ಲಸಿಕೆ ಇದಾಗಿದೆ. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಈ ವ್ಯಾಕ್ಸಿನ್ ರವಾನೆ ಮಾಡಲಾಗಿದೆ.