ನನ್ನ ಮಾತಿನ ಮೇಲೆ ನಂಬಿಕೆ ಇಲ್ಲವೇ, ಮುಂದಿನ 6-7 ತಿಂಗಳು ಕಾಯಿರಿ: ರಾಹುಲ್ ಗಾಂಧಿ - ಕೊರೊನಾ ವೈರಸ್
ನವದೆಹಲಿ: ಯುವಕರಿಗೆ ದೇಶದಲ್ಲಿ ಉದ್ಯೋಗ ನೀಡಲು ಸಾಧ್ಯವಿಲ್ಲ. ಕೊರೊನಾದಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಉಲ್ಭಣಗೊಳ್ಳಲಿದೆ ಎಂದು ಈ ಹಿಂದೆ ನಾನು ಹೇಳಿದಾಗ ಮಾಧ್ಯಮಗಳು ನನ್ನ ಮಾತನ್ನೇ ಗೇಲಿ ಮಾಡಿದ್ದವು. ಆದರೆ ಇದೀಗ ದೇಶದಲ್ಲಿ ಉದ್ಯೋಗ ಸೃಷ್ಟಿಯಾಗುವುದು ಬಹಳ ವಿರಳವಾಗಿದೆ. ನನ್ನ ಮಾತಿನ ಮೇಲೆ ನಿಮಗೆ ನಂಬಿಕೆ ಇಲ್ಲವಾದರೆ ಮುಂದಿನ 6-7 ತಿಂಗಳು ಕಾಯ್ದು ನೋಡಿ ಎಂದು ರಾಹುಲ್ ಗಾಂಧಿ ಸವಾಲು ಹಾಕಿದ್ದಾರೆ.