PSLV-C50 ಉಡ್ಡಯನ ಯಶಸ್ವಿ: ಕಕ್ಷೆ ಸೇರಿದ ಸಂವಹನ ಉಪಗ್ರಹ! ವಿಡಿಯೋ - ಸಂವಹನ ಉಪಗ್ರಹ ಉಡಾವಣೆ
ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಪೋಲಾರ್ ಉಪಗ್ರಹ ಉಡಾವಣಾ ವಾಹನ (ಪಿಎಸ್ಎಲ್‌ವಿ-ಸಿ50) ವನ್ನು ಅಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಈ ಉಪಗ್ರಹ ದೇಶದಲ್ಲಿ ವಿಪತ್ತು ನಿರ್ವಹಣೆ ಮತ್ತು ಅಂತರ್ಜಾಲ ವೃದ್ಧಿಗೆ ಸಹಕಾರಿಯಾಗಲಿದೆ. ಈ ಉಪಗ್ರಹದಿಂದ ಇಡೀ ದೇಶ, ಅಂಡಮಾನ್ ಮತ್ತು ನಿಕೋಬಾರ್ ಮತ್ತು ಲಕ್ಷದ್ವೀಪ ದ್ವೀಪಗಳೂ ಕೂಡಾ ಪ್ರಯೋಜನ ಪಡೆಯಲಿವೆ.