74ನೇ ಸ್ವಾತಂತ್ರ್ಯ ಸಂಭ್ರಮ; ಕೋವಿಡ್ ಮಾನದಂಡಗಳೊಂದಿಗೆ ಕೆಂಪು ಕೋಟೆಯಲ್ಲಿ ಸಿದ್ಧತೆ! - 74 ನೇ ಸ್ವಾತಂತ್ರ್ಯ ದಿನ
74ನೇ ಸ್ವಾತಂತ್ರ್ಯ ದಿನದ ಅಂಗವಾಗಿ, ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಕೊರೊನಾ ಹೊಡೆತ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ಹಾಗೂ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಸ್ವಾತಂತ್ರ್ಯ ದಿನಾಚರಣೆ ಮಾಡಲಾಗುತ್ತಿದೆ. ಕಾರ್ಯಕ್ರಮದಲ್ಲಿ ಹಾಜರಾಗುವ ಗಣ್ಯರ ಸಂಖ್ಯೆ ಹಾಗೂ ಪ್ರಧಾನಿ ಭಾಷಣ ಆಲಿಸಲು ಬರುವ ವೀಕ್ಷಕರ ಸಂಖ್ಯೆಯೂ ಕಡಿಮೆ ಇರಲಿದೆ. ಸಾಮಾಜಿಕ ಅಂತರ ಸೇರಿದಂತೆ ಇತರ ಮಾನದಂಡಗಳನ್ನು ಅನುಸರಿಸಿ ಸ್ವಾತಂತ್ರ್ಯ ದಿನಾಚರಣೆ ಮಾಡಲಾಗುತ್ತಿದೆ. ಇನ್ನೊಂದೆಡೆ ವೈಮಾನಿಕ ದಾಳಿ ಭೀತಿಯಿಂದ ಕೆಂಪುಕೋಟೆ ಸುತ್ತಮುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.