ಜೌಕು ಕಣಿವೆ ಕಾಳ್ಗಿಚ್ಚು: ನೀರು ಮರುಪೂರಣಕ್ಕೆ ಬಂದ ಐಎಎಫ್ ಬಾಂಬಿ ಹೆಲಿಕಾಪ್ಟರ್, ವಿಡಿಯೋ - ಭಾರತೀಯ ವಾಯುಸೇನೆ ಸುದ್ದಿ
ಕೊಹಿಮಾ: ನಾಗಾಲ್ಯಾಂಡ್-ಮಣಿಪುರ ಗಡಿಭಾಗವಾದ ಕೊಹಿಮಾದ ಜೌಕು ಕಣಿವೆಯಲ್ಲಿ ಕಾಳ್ಗಿಚ್ಚು ನಂದಿಸಲು ಭಾರತೀಯ ವಾಯುಸೇನೆಯು ಬಾಂಬಿ ಬಕೆಟ್ ಹೊತ್ತ ನಾಲ್ಕು ಹೆಲಿಕಾಪ್ಟರ್ಗಳನ್ನು ನಿಯೋಜಿಸಿದೆ. ಇದು ದಿಮಾಪುರ ಬಳಿಯ ಸರೋವರದಿಂದ ನೀರನ್ನು ತಂದು ಮರುಪೂರಣಗೊಳಿಸುತ್ತಿದೆ. ಕಣಿವೆಯಲ್ಲಿ ಸಂಭವಿಸಿದ ಭೀಕರ ಕಾಳ್ಗಿಚ್ಚನ್ನು ನಂದಿಸಲು ಐಎಎಫ್ ಹೆಲಿಕಾಪ್ಟರ್‌ಗಳು, 300ಕ್ಕೂ ಹೆಚ್ಚು ಸ್ವಯಂಸೇವಕರು ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಜನವರಿ 2ರಂದು ಐಎಎಫ್ ಹೆಲಿಕಾಪ್ಟರ್‌ಗಳು 8 ಟನ್ ನೀರನ್ನು ಸಿಂಪಡಿಸಿವೆ. ಇನ್ನು ಎರಡು ದಿನಗಳಲ್ಲಿ ಅಗ್ನಿ ಪ್ರಭಾವ ನಿಯಂತ್ರಣಕ್ಕೆ ಬರಲಿದೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ. ಸಮುದ್ರ ಮಟ್ಟದಿಂದ 2,452 ಮೀಟರ್ ಎತ್ತರದಲ್ಲಿರುವ ಜೌಕು ಕಣಿವೆ ಜನಪ್ರಿಯ ಪ್ರವಾಸಿ ತಾಣವೂ ಹೌದು. ಅಷ್ಟೇ ಅಲ್ಲದೆ ಅನೇಕ ಋತುಮಾನದ ಹೂವುಗಳಿಗೆ ಮತ್ತು ಜೈವಿಕ ವೈವಿಧ್ಯತೆಗೆ ಹೆಸರುವಾಸಿಯಾಗಿದೆ.