ಹೆಲಿಕಾಪ್ಟರ್ ಪತನಗೊಂಡ ಸ್ಥಳಕ್ಕೆ ತೆರಳಿದ ವಾಯುಸೇನೆ ಮುಖ್ಯಸ್ಥ ವಿ.ಆರ್.ಚೌಧರಿ - ಕೂನೂರಿಗೆ ಭೇಟಿ ನೀಡಿದ ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ
ತಮಿಳುನಾಡು: ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಅವರು ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರು ಬಳಿ ಹೆಲಿಕಾಪ್ಟರ್ ಪತನಗೊಂಡ ಸ್ಥಳಕ್ಕೆ ತೆರಳಿದ್ದಾರೆ. ಸಿಡಿಎಸ್ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಹಾಗೂ ಇತರರು ಸೇರಿದಂತೆ 14 ಜನರಿದ್ದ ಐಎಎಫ್ ಹೆಲಿಕಾಪ್ಟರ್ ನಿನ್ನೆ ಕುನೂರಿನಲ್ಲಿ ಪತನಗೊಂಡಿತ್ತು. ದುರ್ಘಟನೆಯಲ್ಲಿ 13 ಮಂದಿ ದಾರುಣವಾಗಿ ಮೃತಪಟ್ಟಿದ್ದರು. ಈ ಕುರಿತು ತನಿಖೆ ಮುಂದುವರೆದಿದೆ.