ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ, ನ್ಯಾಯ ಮೇಲುಗೈ ಸಾಧಿಸಲಿದೆ ಎಂದ ವಾದ್ರಾ - ಕಂದಾಯ ಇಲಾಖೆ ಅಧಿಕಾರಿಗಳು ರಾಬರ್ಟ್ ವಾದ್ರಾ
ನವದೆಹಲಿ: ಬೇನಾಮಿ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಂದು ರಾಬರ್ಟ್ ವಾದ್ರ ನಿವಾಸಕ್ಕೆ ತೆರಳಿ ಹೇಳಿಕೆ ಪಡೆದುಕೊಂಡಿದ್ದಾರೆ. ಇದಾದ ಬಳಿಕ ಮಾತನಾಡಿರುವ ಅವರು, ಸಹಕರಿಸಲು ನಾವು ಇಲ್ಲಿದ್ದೇವೆ. ಅವರು ಕೇಳಿರುವ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದೇವೆ. ಅದು ಬೇನಾಮಿ ಆಸ್ತಿಗೆ ಸಂಬಂಧಿಸಿರಲಿಲ್ಲ. ಇದರಲ್ಲಿ ನ್ಯಾಯ ಮತ್ತು ಸತ್ಯ ಮೇಲುಗೈ ಸಾಧಿಸುತ್ತದೆ. ಇದರಲ್ಲಿ ಮರೆಮಾಚುವ ಹಾಗೂ ಚಿಂತೆ ಮಾಡುವ ವಿಷಯ ಇಲ್ಲ. ನಾನು ಯಾವಾಗಲೂ ಸಹಕರಿಸುತ್ತೇನೆ ಎಂದಿದ್ದಾರೆ. ರಾಬರ್ಟ್ ವಾದ್ರಾ ಬ್ರಿಟನ್ನಲ್ಲಿ ಬಹಿರಂಗಪಡಿಸದ ಆಸ್ತಿ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಅವರ ಮೇಲೆ ತನಿಖೆ ನಡೆಯುತ್ತಿದೆ.