ಮಕ್ಕಳಿಗೆ ಸ್ಯಾನಿಟೈಸರ್ ಹಾಕಿದ ಕೇಸ್: ವೈದ್ಯರಿಗೆ ಹೇಳಿದ್ರೂ ಕೇಳಲಿಲ್ಲ ಎಂದ ಆಶಾ ಕಾರ್ಯಕರ್ತೆ! - ಸ್ಯಾನಿಟೈಸರ್ ಹಾಕಿರುವ ಪ್ರಕರಣ
ಮಹಾರಾಷ್ಟ/ಯವತ್ಮಾಲ್: 12 ಜನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಬದಲು ಸ್ಯಾನಿಟೈಸರ್ ಹಾಕಿರುವ ಪ್ರಕರಣ ಮಹಾರಾಷ್ಟ್ರದಲ್ಲಿ ನಡೆದಿದ್ದು, ಅಸ್ವಸ್ಥಗೊಂಡಿರುವ ಮಕ್ಕಳು ಈಗಾಗಲೇ ಯವತ್ಮಾಲ್ನ ಸರ್ಕಾರಿ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದು, ನಾಳೆ ಡಿಸ್ಚಾರ್ಜ್ ಆಗಲಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅಮಾನತುಗೊಂಡಿರುವ ಆಶಾ ಕಾರ್ಯಕರ್ತೆ, ಕಳೆದ 10 ವರ್ಷಗಳಿಂದ ನಾನು ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದು, ಅದು ಪೋಲಿಯೊ ಹನಿ ಅಲ್ಲ ಎಂದು ನಾವು ವೈದ್ಯರಿಗೆ ತಿಳಿಸಿದ್ರೂ ಅವರು ನಮಗೆ ಬೆದರಿಸಿದರು ಎಂದಿದ್ದಾರೆ. ವೈದ್ಯರು ಹೇಳಿದ್ದರಿಂದ ನಾನು ಮಕ್ಕಳಿಗೆ ಪೊಲಿಯೋ ಹನಿ ನೀಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.