ಕರ್ನಾಟಕ

karnataka

ETV Bharat / videos

ಪಾಕ್​ ಪರ ಒವೈಸಿ ಜಪ ಮಾಡ್ತಿದ್ದಾರೆ ಎಂದ ಯೋಗಿ... ಸವಾಲು ಹಾಕಿದ ಎಐಎಂಐಎಂ ಮುಖ್ಯಸ್ಥ! - ಅಸಾದುದ್ದೀನ್ ಓವೈಸಿ ಪಾಕ್​ ಜಪ

By

Published : Oct 21, 2020, 10:07 PM IST

ಹೈದರಾಬಾದ್​: ಬಿಹಾರ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​​ ರಾಹುಲ್​ ಗಾಂಧಿ ಹಾಗೂ ಅಸಾದುದ್ದೀನ್ ಓವೈಸಿ ಪಾಕ್​ ಜಪ ಮಾಡ್ತಿದ್ದಾರೆ. ಭಾರತವನ್ನ ಪಾಕ್​ಗೆ ಹೋಲಿಕೆ ಮಾಡಿ ಹೇಳಿಕೆ ನೀಡುತ್ತಿದ್ದು, ಅಂತಹವರಿದ್ದ ಬಿಹಾರ ಅಭಿವೃದ್ಧಿ ಸಾಧ್ಯವೇ ಎಂದು ಪ್ರಶ್ನೆ ಮಾಡಿದ್ದರು. ಈ ಹೇಳಿಕೆಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ತಿರುಗೇಟು ನೀಡಿದ್ದು, ಅವರು ನಿಜವಾದ ಯೋಗಿ ಆಗಿದ್ದರೆ ಮುಂದಿನ 24 ಗಂಟೆಗಳಲ್ಲಿ ಪುರಾವೆ ತೋರಿಸಲಿ ಎಂದು ಸವಾಲು ಹಾಕಿದ್ದಾರೆ. ನಾನು ಪಾಕಿಸ್ತಾನಕ್ಕೆ ಹೋಗಿ ಭಾರತೀಯ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಿರುವುದು ಅವರಿಗೆ ಗೊತ್ತಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. ಇದೇ ವೇಳೆ ಬಿಹಾರದಲ್ಲಿ ಕಾಂಗ್ರೆಸ್​ ಹಾಗೂ ಆರ್​ಜೆಡಿ ಗೆಲುವು ಸಾಧಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ABOUT THE AUTHOR

...view details