ರಾಜ್ಯ ಬಿಟ್ಟೋಗಿ, ಇಲ್ಲಾಂದ್ರೆ ಹತ್ತಡಿ ಆಳದಲ್ಲಿ ಹೂತು ಹಾಕುತ್ತೇನೆ: MP ಸಿಎಂ ಹೀಗೆ ಗದರಿಸಿದ್ದು ಯಾರಿಗೆ? - ಅಕ್ರಮ ಚಟುವಟಿಕೆಗಳ ವಿರುದ್ಧ ಸಿಎಂ ಆಕ್ರೋಶ
ಹೋಶಂಗಾಬಾದ್: ಮಧ್ಯಪ್ರದೇಶದಲ್ಲಿ ಡ್ರಗ್ ಪೆಡ್ಲರ್, ಲ್ಯಾಂಡ್ ಮಾಫಿಯಾ, ಚಿಟ್ ಫಂಡ್ ಮಾಫಿಯಾ, ಗೂಂಡಾ ಚಟುವಟಿಕೆಗಳು ಎಗ್ಗಿಲ್ಲದೇ ನಡೆಯುತ್ತಿವೆ. ಇದರ ವಿರುದ್ಧ ಕಿಡಿಕಾರಿದ ಸಿಎಂ ಶಿವರಾಜ್ ಸಿಂಗ್ ಚೌಹಾಣ್, 'ನಾನು ಇತ್ತೀಚಿನ ದಿನಗಳಲ್ಲಿ ಅಪಾಯಕಾರಿ ಮನಸ್ಥಿತಿಯಲ್ಲಿದ್ದೇನೆ. ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ನಾನು ಸುಮ್ಮನೆ ಬಿಡುವುದಿಲ್ಲ. ರಾಜ್ಯವನ್ನು ಬಿಟ್ಟು ಹೊರ ನಡೆಯಿರಿ. ಇಲ್ಲದಿದ್ದರೆ ನಾನು ನಿಮ್ಮನ್ನು 10 ಅಡಿ ಆಳದಲ್ಲಿ ಹೂಳುತ್ತೇನೆ. ನೀವು ಎಲ್ಲಿದ್ದೀರಾ ಅನ್ನೋದು ಕೂಡ ಯಾರಿಗೂ ತಿಳಿಯದು' ಎಂದು ಹೋಶಂಗಾಬಾದ್ ಜಿಲ್ಲೆಯ ಕಾರ್ಯಕ್ರಮವೊಂದರಲ್ಲಿ ಹೇಳಿದರು.