ಕೋಲ್ಕತ್ತಾ ವೈದ್ಯಕೀಯ ಕಾಲೇಜಿನಲ್ಲಿ ಲಸಿಕೆ ಪಡೆದ ವೈದ್ಯೆ, ಪೊಲೀಸ್ ಪೇದೆ: ಹೇಳಿದ್ದೇನು!? - ಪಶ್ಚಿಮ ಬಂಗಾಳದ ಮೆಡಿಕಲ್ ಕಾಲೇಜ್
ಕೋಲ್ಕತ್ತಾ: ದೇಶಾದ್ಯಂತ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಪಶ್ಚಿಮ ಬಂಗಾಳದ ಮೆಡಿಕಲ್ ಕಾಲೇಜಿನಲ್ಲೂ ಈ ಅಭಿಯಾನಕ್ಕೆ ಚಾಲನೆ ಸಿಕ್ಕಿದೆ. ಪ್ರಥಮವಾಗಿ ಲಸಿಕೆ ಪಡೆದು ಮಾತನಾಡಿರುವ ವೈದ್ಯೆ ಪ್ರಿಯಾಂಕಾ ಮೈತ್ರಾ, ಇದನ್ನು ತೆಗೆದುಕೊಂಡ ಬಳಿಕ ನಾನು ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ. 28 ದಿನಗಳ ನಂತ್ರ ಮತ್ತೊಂದು ಡೋಸ್ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ. ಇತರರು ಲಸಿಕೆ ತೆಗೆದುಕೊಳ್ಳುವಂತೆ ಒತ್ತಾಯಿಸುತ್ತೇನೆ ಎಂದಿದ್ದಾರೆ. ಇದಾದ ಬಳಿಕ ಲಸಿಕೆ ಪಡೆದುಕೊಂಡಿರುವ ಪೊಲೀಸ್ ಪೇದೆ ತಾವು ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ ಎಂದು ತಿಳಿಸಿದ್ದಾರೆ.