ಕರ್ನಾಟಕ

karnataka

ETV Bharat / videos

ನಾನು ಸಸ್ಯಹಾರಿ,ಉಳ್ಳಾಗಡ್ಡಿ ರುಚಿ ನೋಡಿಲ್ಲ, ಮಾರುಕಟ್ಟೆ ಸ್ಥಿತಿಗತಿ ನಂಗೊತ್ತಿಲ್ಲ: ಕೇಂದ್ರ ಸಚಿವ ಅಶ್ವಿನಿ ಚೌಬೆ - ಯಾವತ್ತು ಉಳ್ಳಾಗಡ್ಡಿ ರುಚಿ ನೋಡಿಯೇ ಇಲ್ಲ

By

Published : Dec 5, 2019, 5:54 PM IST

ದೇಶದಲ್ಲಿ ದಿನದಿಂದ ದಿನಕ್ಕೆ ಈರುಳ್ಳಿ ಬೆಲೆ ಗಗನಕ್ಕೇರುತ್ತಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​​ ಈರುಳ್ಳಿಯನ್ನು ನಾನು ಹೆಚ್ಚು ತಿನ್ನುವುದಿಲ್ಲ ಎಂದು ಹೇಳಿಕೆ ನೀಡಿ ಟೀಕೆಗೊಳಗಾಗಿದ್ದರು. ಈ ಮಧ್ಯೆ ಮತ್ತೋರ್ವ ಕೇಂದ್ರ ಸಚಿವರು ಅಚ್ಚರಿಯ ಹೇಳಿಕೆ ನೀಡಿ ವಿವಾದವನ್ನು ಮೈಮೇಲೆಳೆದುಕೊಂಡಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಸಚಿವ ಅಶ್ವಿನಿ ಚೌಬೆ, ನಾನು ಸಸ್ಯಹಾರಿ, ಈರುಳ್ಳಿ ರುಚಿ ನೋಡಿಲ್ಲ. ಹೀಗಾಗಿ ಮಾರುಕಟ್ಟೆಯಲ್ಲಿ ಅದರ ಸ್ಥಿತಿಗತಿ ಬಗ್ಗೆ ನನಗೆ ಗೊತ್ತಿಲ್ಲ ಎಂದು ಬೇಜವಾಬ್ದಾರಿ ಹೇಳಿಕೆ ಕೊಟ್ಟರು.

ABOUT THE AUTHOR

...view details