ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಬಲಾಢ್ಯರ ಸಮಾಗಮ: ಕುತೂಹಲಕಾರಿ ವಿಡಿಯೋ
ಸಾಮಾನ್ಯವಾಗಿ ಅರಣ್ಯ ಪ್ರದೇಶಗಳಲ್ಲಿ ಹುಲಿ-ಹೆಬ್ಬಾವು ಮುಖಾಮುಖಿಯಾಗುವ ವೇಳೆ ದೊಡ್ಡ ಕಾಳಗವೇ ನಡೆದು ಬಿಡುತ್ತದೆ. ಇಂಥ ಘಟನೆಗಳಿಗೆ ಸಾಕಷ್ಟು ನಿದರ್ಶನಗಳು ದೊರೆತಿವೆ. ಆದ್ರೆ, ನಾಗರಹೊಳೆ ರಾಷ್ಟ್ರೀಯ ಉದ್ಯಾನ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದ ಘಟನೆ ಇದಕ್ಕೆ ತದ್ವಿರುದ್ಧ!. ಅಭಯಾರಣ್ಯದಲ್ಲಿ ಹುಲಿ ಹಾಗೂ ಬೃಹತ್ ಗಾತ್ರದ ಹೆಬ್ಬಾವು ದಿಢೀರ್ ಮುಖಾಮುಖಿಯಾಗಿವೆ. ಕಾಡಿನ ಮಧ್ಯೆ ಹುಲಿರಾಯ ಹೋಗುತ್ತಿದ್ದಾಗ ದಾರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಅಡ್ಡಲಾಗಿ ಮಲಗಿತ್ತು. ಈ ವೇಳೆ ಎರಡೂ ವನ್ಯಮೃಗಗಳು ಪರಸ್ಪರ ಕಾಳಗಕ್ಕಿಳಿಯದೆ ತಮ್ಮಷ್ಟಕ್ಕೆ ತಾವು ಸುಮ್ಮನಾಗಿವೆ. ಹುಲಿ ನಿಧಾನವಾಗಿ ಪೊದೆಯೊಳಗಿಂದ ಮುಂದೆ ಹೋಗಿದೆ. ಭಾರತೀಯ ಅರಣ್ಯ ಸೇವೆಗಳ(IFS) ಅಧಿಕಾರಿ ಸುಶಾಂತ್ ನಂದಾ ಅವರು ಈ ಕುತೂಹಲಕಾರಿ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.