Watch video - ಕೋತಮಂಗಲಂ ಬಳಿ 10 ಅಡಿಗೂ ಉದ್ದದ ಕಾಳಿಂಗ ಸರ್ಪ ರಕ್ಷಣೆ - ಕಾಳಿಂಗ ಸರ್ಪ ರಕ್ಷಣೆ
ಕೊಡನಾಡಿನ ವನ್ಯಜೀವಿ ರಕ್ಷಣಾ ತಂಡ ಸುಮಾರು 10 ಅಡಿಗೂ ಉದ್ದದ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿದ್ದಾರೆ. ಕೇರಳದ ಕೋತಮಂಗಲಂ ಬಳಿಯ ಸಣ್ಣ ನೀರಿನ ತೊರೆಯೊಂದರಲ್ಲಿ ಇದ್ದ ಕಾಳಿಂಗ ಸರ್ಪವನ್ನು ನರೇಗಾ ಕಾಮಗಾರಿ ಕೆಲಸಗಾರರು ನೋಡಿದ್ದಾರೆ. ಬಳಿಕ ವಿಷಯ ತಿಳಿದ ಕೊಡನಾಡಿನ ವನ್ಯಜೀವಿ ರಕ್ಷಣಾ ತಂಡ ಈ ಹಾವನ್ನು ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ.