ಕರ್ನಾಟಕ

karnataka

ETV Bharat / videos

ಚಹಾ ಜೊತೆ ಸಂಜೆ ಸ್ನ್ಯಾಕ್ಸ್​ಗೆ ಗರಿಗರಿ ಚಕ್ಕುಲಿ.. ನೀವೂ ಟ್ರೈ ಮಾಡಿ!! - Priya

By

Published : Jun 17, 2020, 6:01 PM IST

ಸಂಜೆಯ ಚಹಾ ವೇಳೆ ಬಿಸಿಬಿಸಿ ಚಕ್ಕುಲಿ ಸವಿಯಲು ಇದ್ದ್ರೆ, ಬೆಸ್ಟ್​ ಕಾಂಬಿನೇಷನ್​. ಮನೆಯಲ್ಲೇ ರುಚಿರುಚಿಯಾದ ಹಾಗೂ ಗರಿಗರಿ ಚಕ್ಕುಲಿಯನ್ನು ನೀವೇ ತಯಾರಿಸಬಹುದು. ಅಕ್ಕಿಹಿಟ್ಟಿಗೆ ಕಡ್ಲೆಹಿಟ್ಟು, ಸ್ವಲ್ಪ ಇಂಗು, ಚಿಟಿಕೆ ಉಪ್ಪು, ಖಾರದ ಪುಡಿ, ಅಜ್ವಾನ, ಬಿಳಿ ಎಳ್ಳು, ಕರಗಿಸಿದ ಬೆಣ್ಣೆ ಹಾಕಿ, ಅಗತ್ಯವಿರುವಷ್ಟು ನೀರು ಹಾಕಿಕೊಂಡು ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು. ಹಿಟ್ಟು ತಯಾರಾದ ಬಳಿಕ ಚಕ್ಕುಲಿ ಹೊರಳಿಗೆ ಎಣ್ಣೆ ಹಚ್ಚಿಕೊಂಡು ಬಿಸಿ ಎಣ್ಣೆಯಲ್ಲಿ ಚಕ್ಕುಲಿ ಒತ್ತಿ ಕರಿಯಬೇಕು. ಚಕ್ಕುಲಿ ಕಂದು ಬಣ್ಣಕ್ಕೆ ತಿರುಗಿದ ಬಳಿಕ ಬಿಸಿಬಿಸಿಯಾಗಿ ಸರ್ವ್​ ಮಾಡಿದ್ರೆ, ರುಚಿಕರ ಚಕ್ಕುಲಿ ಸವಿಯಲು ಸಿದ್ಧವಾಗುತ್ತದೆ. ಚಕ್ಕುಲಿ ಮಾಡುವ ವಿಧಾನಕ್ಕಾಗಿ ಈ ವಿಡಿಯೋವನ್ನು ನೋಡಿ. ನೀವೂ ಮನೆಯಲ್ಲಿ ಟ್ರೈ ಮಾಡಿ..

ABOUT THE AUTHOR

...view details