Watch : ಹೆದ್ದಾರಿ ಮೇಲೆ ಕುಸಿದು ಬಿದ್ದ ಬೆಟ್ಟದ ಭಾಗ.. ವಾಹನಗಳು ಜಖಂ.. - ಕೇದಾರನಾಥ-ಬದರಿನಾಥ ಹೆದ್ದಾರಿ
ರುದ್ರಪ್ರಯಾಗ್ : ಉತ್ತರಾಖಂಡ ರಾಜ್ಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಭೂಕುಸಿತ ಪ್ರಕರಣ ಹೆಚ್ಚುತ್ತಿವೆ. ಇದೀಗ ರುದ್ರಪ್ರಯಾಗ್ ಜಿಲ್ಲೆಯ ಕೇದಾರನಾಥ-ಬದರಿನಾಥ ಹೆದ್ದಾರಿ ಮೇಲೆ ಬೆಟ್ಟದ ಭಾಗ ಕುಸಿದು ಬಿದ್ದಿದ್ದು, ಅಲ್ಲಿದ್ದ ಟ್ರಕ್, ಕಾರುಗಳಿಗೆ ಹಾನಿಯಾಗಿವೆ. ಅದೃಷ್ಟವಶಾತ್ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಅಲ್ಲಿ ನಿಂತಿದ್ದ ಕೆಲವರು ಇದನ್ನು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ವಿಡಿಯೋ ವೈರಲ್ ಆಗಿದೆ.