ರೈಲಿನಡಿ ಸಿಲುಕುತ್ತಿದ್ದ ವ್ಯಕ್ತಿ ರಕ್ಷಿಸಿದ ಆರ್ಪಿಎಫ್ ಜವಾನ: ವಿಡಿಯೋ - ಮಹಾರಾಷ್ಟ್ರ
ರೈಲಿನಡಿ ಬೀಳುತ್ತಿದ್ದ 79 ವರ್ಷದ ವ್ಯಕ್ತಿಯನ್ನು ಆರ್ಪಿಎಫ್ ಜವಾನನೊಬ್ಬ ರಕ್ಷಿಸಿರುವ ಘಟನೆ ಮಹಾರಾಷ್ಟ್ರದ ಥಾಣೆಯ ಕಲ್ಯಾಣ್ ನಿಲ್ದಾಣದಲ್ಲಿ ನಡೆದಿದೆ. ಮಸೂರ್ ಬಾಫರ್ ಅಹಮದ್ ಎಂಬಾತನೇ ಕೂದಲೆಳೆ ಅಂತರದಲ್ಲಿ ಪಾರಾದ ವ್ಯಕ್ತಿ. ಚಲಿಸುತ್ತಿದ್ದ ರೈಲಿಗೆ ಸಿಲುಕಿದ್ದ ಮಸೂರ್ನನ್ನು ಅಲ್ಲೇ ಇದ್ದ ಆರ್ಪಿಎಫ್ ಯೋಧ ತಕ್ಷಣ ರಕ್ಷಿಸಿದ್ದಾನೆ. ಘಟನೆಯ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.