ರೋಹ್ಟಕ್ನಲ್ಲಿ ಮರ್ಯಾದಾ ಹತ್ಯೆ.. ಸಿಸಿಟಿವಿಯಲ್ಲಿ ದೃಶ್ಯ ಸೆರೆ - ಮರ್ಯಾದಾ ಹತ್ಯೆ
ರೋಹ್ಟಕ್ (ಹರಿಯಾಣ): ಪ್ರೀತಿಸಿ ಮದುವೆಯಾದರು ಎಂಬ ಕಾರಣಕ್ಕೆ ಹುಡುಗಿಯ ಮನೆಯವರು ದಂಪತಿಯನ್ನೇ ಕೊಲೆ ಮಾಡಿರುವ ಘಟನೆ ಹರಿಯಾಣದ ರೋಹ್ಟಕ್ನಲ್ಲಿ ನಡೆದಿದೆ. ಹುಡುಗಿಯ ಕುಟುಂಬದವರು ಜನಜಂಗುಳಿಯಿದ್ದ ಬೀದಿಯಲ್ಲಿಯೇ ಇಬ್ಬರ ಮೇಲೂ ಗುಂಡು ಹಾರಿಸಿದೆ. ಈ ಘಟನೆಯ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹುಡುಗಿಯ ತಂದೆ ಮದುವೆಗೆ ಒಪ್ಪುವ ನೆಪದಲ್ಲಿ ಕರೆ ಮಾಡಿ ನಂತರ ಇಬ್ಬರಿಗೂ ಗುಂಡು ಹಾರಿಸಿದ್ದು, ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಯುವಕ ಗಂಭೀರ ಗಾಯಗೊಂಡಿದ್ದು, ತಕ್ಷಣ ಆಸ್ಪತ್ರೆಗೆ ಸೇರಿಸಿತ್ತಾದರೂ, ಆತನೂ ಮೃಪಟ್ಟಿದ್ದಾನೆ. ಘಟನೆಯ ಬಳಿಕ ಯುವತಿಯ ತಂದೆ ಪರಾರಿಯಾಗಿದ್ದು, ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ನಡೆಸುತ್ತಿದ್ದಾರೆ.