ಹಿಮವರ್ಷ...ಪ್ರವಾಸಿಗರಿಗೆ ರಮಣೀಯ ದೃಶ್ಯಗಳಾದರೆ ಇಲ್ಲಿನ ನಿವಾಸಿಗಳಿಗೆ ಮಾತ್ರ...? - ಹಿಮಪಾತ
ಗಂಭೀರ ಸೌಂದರ್ಯದ ಹಿಮಾಲಯ ಪರ್ವತಗಳ ಸಾಮೀಪ್ಯವಿರುವ ಜಮ್ಮುಕಾಶ್ಮೀರದ ಪಿರ್ಪಂಜಾಲ್, ಹಿಮಾಚಲ ಪ್ರದೇಶದ ಮನಾಲಿ, ಉತ್ತರಾಖಂಡ್ನ ಪಿತೋರಾಗ್ರ ಮತ್ತು ರಾಣಿಖೇತ್ನ ಕೆಲ ಪ್ರದೇಶಗಳು ಸುರಿಯುತ್ತಿರುವ ಹಿಮವರ್ಷಕ್ಕೆ ತತ್ತರಿಸಿವೆ. ಇತ್ತ ರಸ್ತೆಗಳೂ ಕಾಣದಂತಾಗಿವೆ. ಮನೆಗಳು ಮುಚ್ಚಿವೆ. ಒಂದೆಡೆ ಅಲ್ಲಿನ ಜನರ ಬದುಕು ಅಸ್ತವ್ಯಸ್ತವಾಗಿದೆ. ಇಲ್ಲಿ ಸುರಿಯುತ್ತಿರುವ ಹಿಮ ವರ್ಷಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಆದರೆ, ಪ್ರವಾಸಿಗರು ಇಲ್ಲಿನ ಸದ್ದುಗದ್ದಲವಿಲ್ಲದ ಪ್ರಶಾಂತ ಪರಿಸರಗಳಲ್ಲಿ ಸುರಿಯುತ್ತಿರುವ ಹಿಮಕ್ಕೆ ಮನಸೋತಿದ್ದಾರೆ.