ಆಹಾ! ನೋಡಲು ಎಷ್ಟು ಸುಂದರ... ಈ 'ಸ್ಪರ್ಗನಗರಿ' - ಅರ್ಧದಷ್ಟು ಬೆಳೆ ಹಿಮದಲ್ಲಿ ಹೂತುಹೋಗಿ
ಆಹಾ! ನೋಡಲು ಎಷ್ಟು ಸುಂದರ.. ಮುಂಜಾನೆ 5ಗಂಟೆ ಸುಮಾರಿಗೆ ವಿದ್ಯುತ್ ದೀಪಗಳ ಮಧ್ಯೆ ಸುರಿಯುತ್ತಿರುವ ಸಣ್ಣ ಪ್ರಮಾಣದ ಹಿಮ. ಮತ್ತೊಂದೆಡೆ ಹನಿಯಂತೆ ಒಂದರ ಹಿಂದೆ ಒಂದು ಸಾಲಾಗಿ ಬಂದು ಮುತ್ತಿಕ್ಕುತ್ತಿರುವ ಹಿಮದಿಂದ ಇಳೆಯೇ ಅರ್ಧದಷ್ಟು ಹೂತುಹೋಗಿದೆ. ತುಂಬಿದ ಹಿಮದ ರಾಶಿ ಶ್ವೇತವರ್ಣದ ಸೀರೆಯನ್ನೇ ಹೊದಿಸಿ ಧರೆಗೆ ಕಾವು ನೀಡುತ್ತಿದ್ದಂತಿದೆ. ಎತ್ತ ತಿರುಗಿ ನೋಡಿದರೂ ಹಿಮವೋ ಹಿಮ. ನೋಡ ನೋಡುತ್ತಿದ್ದಂತೆ ಸ್ವರ್ಗವೇ ನಮ್ಮ ಮುಂದೆ ಸರಿಯುತ್ತಿದೆ ಎಂಬ ಭಾವನೆ ಮೂಡುವಷ್ಟರ ಮಟ್ಟಿಗಿದೆ ಈ ಪ್ರವಾಸಿತಾಣ. ಈ ಎಲ್ಲಾ ಮನಮೋಹಕ ದೃಶ್ಯ ಕಾಣಸಿಕ್ಕಿದ್ದು ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಎತ್ತರ ಪ್ರದೇಶದಲ್ಲಿ..