IPLನಲ್ಲಿ ಬೆಂಚ್ ಕಾಯ್ದಿದ್ದ ಎಡಗೈ ಮಾಂತ್ರಿಕ.. ವಾರ್ನ್ 14 ಡಿಗ್ರಿ, ಕುಲ್‌ದೀಪ್ 5.8 ಡಿಗ್ರಿ! - undefined
ಬರೋಬ್ಬರಿ 26 ವರ್ಷ ಕಳೆದಿದೆ. ಮ್ಯಾಂಚೆಸ್ಟರ್ ಓಲ್ಡ್ ಟ್ರಾಫರ್ಡ್ ಗ್ರೌಂಡ್‌ನಲ್ಲಿ ಆಸೀಸ್‌ನ ಶೇನ್ ವಾರ್ನ್, ಇಂಗ್ಲೆಂಡ್‌ನ ಮೈಕ್ ಗ್ಯಾಟಿಂಗ್ ವಿಕೆಟ್‌ನ ಉರುಳಿಸಿದ್ದರು. ಲೆಗ್‌ಸ್ಪಿನ್ ಮಾಡಿದ್ದ ಬಾಲ್‌ನ ಮೈಕ್ ಗ್ಯಾಟಿಂಗ್ ತಡೆಯಲಾಗಿರಲಿಲ್ಲ. ಲೆಗ್‌ಸೈಡ್‌ನಿಂದ ಬಂದ ಬಾಲ್ ಆಫ್‌ಸೈಡ್ ಸ್ಪಂಪ್‌ನ ಬೇಲ್ಸ್ ಎಗರಿಸಿತ್ತು. ಅದೇ ಗ್ರೌಂಡ್‌ನಲ್ಲಿ ಪಾಕ್ ವಿರುದ್ಧದ ಸಂಡೇ ನಡೆದ ವಿಶ್ವಕಪ್ ಪಂದ್ಯದಲ್ಲಿ ಕುಲ್‌ದೀಪ್ ಯಾದವ್ ಮಾಡಿದ್ದ ಬಾಲ್ ಆ ದಿನ ನೆನಪಿಸಿತು.