ಅಯೋಧ್ಯೆಯ ಭವ್ಯ ರಾಮ ಮಂದಿರ ಹೇಗಿರಲಿದೆ...? ಇಲ್ಲಿದೆ ಒಳನೋಟ - ಶ್ರೀರಾಮ ವಿಗ್ರಹ
ಅಯೋಧ್ಯಾ (ಉತ್ತರ ಪದೇಶ): ಆಗಸ್ಟ್ 5ರಂದು ನಡೆಯಲಿರುವ ಐತಿಹಾಸಿಕ ಭೂಮಿ ಪೂಜೆ ಸಮಾರಂಭದ ನಂತರ ಪವಿತ್ರ ನಗರ ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ. 161 ಅಡಿ ಎತ್ತರ ಹಾಗೂ 141 ಅಡಿ ಅಗಲದ ಮೂರು ಮಹಡಿಗಳ ಭವ್ಯ ದೇವಾಲಯ ನಿರ್ಮಾಣವಾಗಲಿದೆ. ನೆಲಮಹಡಿಯಲ್ಲಿ ಭಗವಾನ್ ಶ್ರೀರಾಮ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗುತ್ತದೆ. 3.5 ವರ್ಷದಲ್ಲಿ ರಾಮ ಮಂದಿರ ನಿರ್ಮಾಣವಾಗುವ ನಿರೀಕ್ಷೆಯಿದೆ. ವಾಸ್ತುಶಿಲ್ಪಿ ನಿಖಿಲ್ ಸೋಂಪುರ ಹಾಗೂ ಆಶಿಶ್ ಸೋಂಪುರ ನೂತನ ವಿನ್ಯಾಸ ಸಿದ್ಧಗೊಳಿಸಿದ್ದಾರೆ.
Last Updated : Aug 4, 2020, 12:59 PM IST