ಕೋಳಿ ಕೊಂದಿದ್ದಕ್ಕೆ ಏಳು ಜನರ ಮೇಲೆ ಎಫ್ಐಆರ್, ‘ಚಿಕನ್’ಗೆ ಮರಣೋತ್ತರ ಪರೀಕ್ಷೆ! - ಕೈಮೂರಿನಲ್ಲಿ ಕೋಳಿ ಕೊಲೆ
ಬಿಹಾರದ ಕೈಮೂರ್ನಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಕೋಳಿ ಕೊಲೆ ಮಾಡಿದ್ದಕ್ಕೆ ಏಳು ಜನರ ವಿರುದ್ಧ ಎಫ್ಐಆರ್ ದಾಖಲಾಗಿರುವ ಘಟನೆ ಜಿಲ್ಲೆಯ ತಿರೋಜಪುರದಲ್ಲಿ ನಡೆದಿದೆ. ಗ್ರಾಮದ ಕಮಲಾ ದೇವಿ ಕೋಳಿ ಫಾರ್ಮ್ ತೆರೆದಿದ್ದಾರೆ. ಈ ವೇಳೆ, ಪಕ್ಕದವರು ಕೋಳಿಯೊಂದನ್ನು ಹಿಡಿದು ಸಾಯಿಸಿದ್ದಾರೆ. ಬಳಿಕ ಕಮಲಾದೇವಿ ಮತ್ತು ಆಕೆಯ ಮಗ ಇಂದಲ್ ಮೇಲೆ ಹಲ್ಲೆ ಮಾಡಿದ್ದಾರೆ. ಕೋಳಿ ಹತ್ಯೆ ಮಾಡಿ ನಮ್ಮನ್ನು ಥಳಿಸಿದ್ದಾರೆ ಎಂದು ಏಳು ಜನರ ವಿರುದ್ಧ ಕಮಲಾದೇವಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ಪಶು ವೈದ್ಯಶಾಲೆಯಲ್ಲಿ ಕೋಳಿಗೆ ಮರಣೊತ್ತರ ಪರೀಕ್ಷೆ ನಡೆಸಿದ್ದಾರೆ. ಮರಣೊತ್ತರ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.