ಒಂದೇ ಏಟಿಗೆ ನಾಗರಹಾವಿನ ರುಂಡ ಚೆಂಡಾಡಿ ನುಂಗಿದ ಹುಂಜ... ವಿಡಿಯೋ ವೈರಲ್! - ಮೇದಕ್ನಲ್ಲಿ ಹಾವನ್ನು ನುಂಗಿದ ಕೋಳಿ
ಸಹಜವಾಗಿ ಹುಂಜ, ಕೋಳಿಗಳು ನಾಗರಹಾವು ನೋಡಿದ್ರೆ ಹೆದರುತ್ತೆ. ಆದ್ರೆ ಇಲ್ಲೊಂದು ಹುಂಜ ನಾಗರಹಾವಿನ ಮರಿ ಜೊತೆ ಕಾಳಗಕ್ಕೆ ನಿಂತು ಅದನ್ನು ನುಂಗಿದೆ. ಹೌದು, ಈ ಘಟನೆ ಪಕ್ಕದ ರಾಜ್ಯ ತೆಲಂಗಾಣದ ಮೆದಕ್ ಜಿಲ್ಲೆಯ ಶಭಾಷ್ಪಲ್ಲಿ ಗ್ರಾಮದಲ್ಲಿ ನಡೆದಿದೆ. ಹುಂಜ ಆಹಾರ ಹುಡುಕಾಟದಲ್ಲಿದ್ದಾಗ ನಾಗರಹಾವಿನ ಮರಿ ಹೆಡೆಬಿಚ್ಚಿ ಕಾಳಗಕ್ಕೆ ನಿಂತಿದೆ. ಇದರಿಂದ ಕೋಪಗೊಂಡ ಹುಂಜ ಹಾವಿನ ಮರಿಯನ್ನು ಕುಕ್ಕಿ ಕೊಂದಿದೆ. ಬಳಿಕ ಒಂದೇ ಏಟಿಗೆ ಮರಿಯನ್ನೇ ನುಂಗಿ ತನ್ನ ಹಸಿವನ್ನು ನಿಗಸಿಕೊಂಡಿದೆ. ಈ ವಿಡಿಯೋ 2017ರಲ್ಲೇ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಈಗ ಮತ್ತೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಫುಲ್ ಹೌಹಾರಿದ್ದಾರೆ.
Last Updated : Aug 1, 2019, 2:03 PM IST