ಕರ್ನಾಟಕ

karnataka

ETV Bharat / videos

ಕುಲ್ಲು, ಲಾಹೌಲ್​ ಸ್ಪಿಟಿಯಲ್ಲಿ ಭಾರಿ ಹಿಮಪಾತ: ಹಿಮಾವೃತವಾದ ವಾಹನಗಳು - ವಿಡಿಯೋ

By

Published : Jan 24, 2021, 12:38 PM IST

ಲಾಹೌಲ್ ಸ್ಪಿಟಿ (ಹಿಮಾಚಲ ಪ್ರದೇಶ): ಕುಲ್ಲು ಮತ್ತು ಲಾಹೌಲ್-ಸ್ಪಿಟಿ ಜಿಲ್ಲೆಗಳಲ್ಲಿ ಭಾರಿ ಹಿಮಪಾತವಾಗಿದ್ದು, ರಸ್ತೆಗಳು ಬಂದ್​ ಆಗಿವೆ. ಶನಿವಾರ ರಾತ್ರಿ, ರೋಹ್ಟಾಂಗ್ ಪಾಸ್, ಅಟಲ್ ಟನಲ್​ನ ದಕ್ಷಿಣ ಪೋರ್ಟಲ್, ಧುರಿ ಮತ್ತು ಸಿಸ್ಸು ಲಾಹೌಲ್-ಸ್ಪಿಟಿ ಪ್ರದೇಶಗಳಲ್ಲಿ ಭಾರಿ ಹಿಮಪಾತವಾಗಿದೆ. ಈ ಹಿನ್ನೆಲೆಯಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಸಿಸ್ಸುವಿನಲ್ಲಿ ಅರ್ಧ ಅಡಿ ಹಿಮ ಬಿದ್ದಿದೆ. ಲಾಹೌಲ್ ಕಣಿವೆಯ ಸಿಸ್ಸುವಿನಲ್ಲೂ ಅರ್ಧ ಅಡಿಗಿಂತ ಹೆಚ್ಚು ಹಿಮಪಾತವಾಗಿದೆ. ಸದ್ಯ ರಸ್ತೆಯಿಂದ ಹಿಮವನ್ನು ತೆಗೆದುಹಾಕುವ ಕೆಲಸದಲ್ಲಿ ಬಿಆರ್​ಒ ನಿರತವಾಗಿದೆ. ಎಸ್​ಪಿ ಗೌರವ್ ಸಿಂಗ್ ಮಾತನಾಡಿ, ಜನರು ಪರ್ವತ ಮತ್ತು ಹಿಮಭರಿತ ಪ್ರದೇಶಗಳ ಕಡೆಗೆ ಹೋಗದಂತೆ ಮನವಿ ಮಾಡಿದ್ದಾರೆ. ಹಿಮಪಾತವು ಮಂಜು, ಜಾರು ರಸ್ತೆಗಳು, ಭೂಕುಸಿತ ಮತ್ತು ಹಿಮಪಾತಕ್ಕೆ ಗುರಿಯಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಗುಲಾಬಾದ ಕೋಥಿಯ ಅಟಲ್ ಟನಲ್ ರೋಹ್ಟಾಂಗ್ ಕಡೆಗೆ ಪ್ರವಾಸಿಗರ ಸಂಚಾರವನ್ನು ನಿಲ್ಲಿಸಲಾಗಿದೆ.

ABOUT THE AUTHOR

...view details